Radio Earwig

June 25, 2025

contactmahitideepa@gmail.com

Radio Earwig ಏನಿದು ಕೆಂಪು ಕಲರ್ ಡಿವೈಸ್ ಯಾಕಿದನ್ನ ಆಟಗಾರರು ಹಾಕಿದ್ದಾರೆ..?

radio earwig used in India vs England test, radio earwig device, how radio earwig works, radio earwig technology, covert communication device, radio earwig for stage performers, invisible earpiece communication, spy earpiece radio system, cricket match communication tools, radio earwig technology in sports, live match audio device cricket

Radio earwig used in India vs England test

India England test match technology

Radio earwig in cricket : ಟೆಸ್ಟ್ ಕ್ರಿಕೆಟ್ ನೋಡಲು ತುಸು ಬೋರ್ ಆದರೂ ಸಹ ಇದಕ್ಕೆ ಅಭಿಮಾನಿಗಳೇನು ಕಡಿಮೆ ಇಲ್ಲ. ನಿಜವಾದ ಕ್ರಿಕೆಟ್ ಅಭಿಮಾನಿಗಳು ಟೆಸ್ಟ್ ಕ್ರಿಕೆಟ್ ಅನ್ನೇ ಅತಿ ಹೆಚ್ಚು ಇಷ್ಟಪಡುವುದು.  
ಇತ್ತೀಚೆಗೆ ನಡೆದ ಭಾರತ ಹಾಗು ಇಂಗ್ಲೆಂಡ್ ಟೆಸ್ಟ್ ಸೀರೀಸ್ ನಲ್ಲಿ ಆಟಗಾರರು ಕೆಂಪು ಬಣ್ಣದ ಡಿವೈಸ್ ಅನ್ನು ಹಾಕಿಕೊಂಡಿದ್ದರು, ವಿಶೇಷವಾಗಿ ಸಿರಾಜ್ ಹಾಗು ಸಾಯಿ ಸುದರ್ಶನ್ ರವರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿತ್ತು, ಹಾಗಿದ್ರೆ ಏನಿದು ಎಂಬುದರ ಬಗ್ಗೆ ತಿಳಿದಿಕೊಳ್ಳೋಣ. 

Radio Earwig
Source : Jio Hotstor

“ರೇಡಿಯೋ ಇಯರ್‌ವಿಗ್” ಅಂದ್ರೇನು?: What is a Radio Earwig?

ರೇಡಿಯೋ ಇಯರ್‌ವಿಗ್ ಎಂದರೆ ಒಂದು ಸಣ್ಣ ಇಯರ್‌ಪೀಸ್ ಸಾಧನ, ಕ್ರೀಡಾಂಗಣದಲ್ಲಿ ಕ್ರಿಕೆಟ್ ವೀಕ್ಷಿಸುವ ಸಂದರ್ಭದಲ್ಲಿ ಕೆಲವು ವಿಷಯಗಳು ಅರ್ಥವಾಗದೆ ಇರಬಹುದು.  ಆದ್ದರಿಂದ ರೇಡಿಯೋ ಇಯರಿಂಗ್ ಬಳಸಬಹುದು. ಇದನ್ನು ಕ್ರಿಕೆಟ್ ಮೈದಾನದಲ್ಲೇ ಪ್ರೇಕ್ಷಕರು ಕಿವಿಗೆ ಹಾಕಿಕೊಂಡು ನೇರ ಪ್ರಸಾರ ಕೇಳಿಸಿಕೊಳ್ಳಬಹುದು ಮಾಡಬಹುದು. ಈ ಸಾಧನದ ಮೂಲಕ ಪ್ರೇಕ್ಷಕರು ಸ್ಟೇಡಿಯಂನಲ್ಲಿ ಕುಳಿತಿರುವಾಗಲೇ:
• ಲೈವ್ ಕಾಮೆಂಟರಿ
• ಆಟಗಾರರ ವಿಶ್ಲೇಷಣೆ,
• ಆಂತರಿಕ ಮಾಹಿತಿ,
• ಡಿಆರ್‌ಎಸ್ ವಿವರ

ಇವೆಲ್ಲವನ್ನು ನೇರವಾಗಿ ಕೇಳಬಹುದು.

ರೇಡಿಯೋ ಇಯರ್‌ವಿಗ್ ಉಪಯೋಗದ ಲಾಭಗಳು

 1. ನಿಖರ ಕಾಮೆಂಟರಿ

ನಾವು TV ಅಲ್ಲಿ ನೋಡುವಾಗ ಸಿಗುವ ಪ್ರತಿ ವಿವರಗಳು ಉದಾಹರಣೆ ಪ್ರತಿ ಚೆಂಡಿನ ಹಿಂದಿನ ತಂತ್ರ, ಆಟಗಾರರ ಚಲನೆ, ಫೀಲ್ಡಿಂಗ್ ಸೇಟ್‌ಅಪ್ ಇತ್ಯಾದಿಗಳನ್ನು ವಿವರಣಾತ್ಮಕವಾಗಿ ತಿಳಿದುಕೊಳ್ಳಬಹುದು.

 2. ಸ್ಟಾಟ್ಸ್ ಮತ್ತು ಮಾಹಿತಿಗಳು

ಅಂಕಿಸಂಕಿಗಳೇ ಕ್ರಿಕೆಟ್ ನಾ ಜೀವಾಳ. ಅಂಕಿ ಸಂಖ್ಯೆ ಮಾಹಿತಿ ಎಲ್ಲವನ್ನೂ ತಿಳಿದುಕೊಳ್ಳಬಹುದು. ಕೇವಲ ಕಣ್ಣುಗಳಿಂದ ಕಣ್ತುಂಬಿಕೊಳ್ಳುವುದು ಸಾಕಾಗದ ಸಂದರ್ಭಗಳಲ್ಲಿ, ಕಾಮೆಂಟರಿ ಮೂಲಕ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

 3. ಡಿಆರ್‌ಎಸ್ ಕುರಿತ ವಿವರ

ಮೈದಾನದಲ್ಲಿ ಪ್ರೇಕ್ಷಕರು ಸಾಮಾನ್ಯವಾಗಿ ಡಿಆರ್‌ಎಸ್ ನಿರ್ಣಯದ ಹಿಂದಿನ ಕಾರಣಗಳನ್ನು ತಿಳಿಯಲಾಗದ ಪರಿಸ್ಥಿತಿಯಲ್ಲಿ ಇಯರ್‌ವಿಗ್ ಅತ್ಯುತ್ತಮ ಸಾಧನ.

 4. ಮೈದಾನದಲ್ಲೇ ಬ್ರಾಡ್‌ಕಾಸ್ಟ್ ಅನುಭವ

ವೀಕ್ಷಣೆ ಜೊತೆಗೆ ಕೇಳುವ ಮೂಲಕ ಒಳ್ಳೆಯ ಅನುಭವ.

ಇದನ್ನು ಓದಿ : Diet kannada |30 ದಿನ ‘ನೋ ಶುಗರ್’ ಚ್ಯಾಲೆಂಜ್: ದೇಹದಲ್ಲಿ ಏನಾಗುತ್ತೆ?

ಇದು ಎಲ್ಲೆಲ್ಲಿ ಲಭ್ಯ?

ರೇಡಿಯೋ ಇಯರ್‌ವಿಗ್” ಬಹುತೆಕ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಅಥವಾ ಮುಖ್ಯ ಟೂರ್ನಿಗಳ ಸಂದರ್ಭದಲ್ಲಿ ಲಭ್ಯವಿರುತ್ತದೆ. ಇಂಗ್ಲೆಂಡ್‌ನ ಲಾರ್ಡ್ಸ್, ಆಸ್ಟ್ರೇಲಿಯಾದ MCG ಮುಂತಾದ ಪ್ರಮುಖ ಮೈದಾನಗಳಲ್ಲಿ ಈ ಸೇವೆ ಪ್ರಸಿದ್ಧವಾಗಿದೆ.

ಟೆಸ್ಟ್ ಕ್ರಿಕೆಟ್ ಎಂದರೆ ಗಂಭೀರತೆ, ತಾಳ್ಮೆ ಮತ್ತು ತಿಳಿವಳಿಕೆಯ ಆಟ. ಹಾಗಾಗಿ, ನೀವು ಮುಂದಿನ ಟೆಸ್ಟ್ ಪಂದ್ಯ ನೋಡಲು ಮೈದಾನಕ್ಕೆ ಹೋಗುತ್ತಿದ್ದರೆ, “ರೇಡಿಯೋ ಇಯರ್‌ವಿಗ್” ಇಯರ್‌ಪೀಸ್ ಬಳಸಿದರೆ ಆಟದ ಪ್ರತಿ ಕ್ಷಣವನ್ನೂ ಹೃದಯಂಗಮವಾಗಿ ಅನುಭವಿಸಬಹುದು


ಇದನ್ನು ಓದಿ : Work from home Jobs Kannada : ನಿರೋದ್ಯೋಗಿಗಳಿಗೆ ಆನ್ಲೈನ್‌ ಮೂಲಕ ದುಡಿಮೆ ಮಾಡುವ 5 ಉತ್ತಮ ಮಾರ್ಗಗಳು

FAQ

ರೇಡಿಯೋ ಇಯರ್‌ವಿಗ್ ಅಂದ್ರೇನು?

ಇದು ಆಟರಗಾರ ಅಥವಾ ವೀಕ್ಷಕ ಕಿವಿಯಲ್ಲಿ ಇಡುವ ವೈರ್‌ಲೆಸ್ ಸಾಧನವಾಗಿದ್ದು, ಕಾಮೆಂಟ್ರಿ ಸೂಚನೆಗಳನ್ನು ಕೇಳಲು ಸಹಾಯಮಾಡುತ್ತದೆ.

ಕ್ರಿಕೆಟರ್ ಸಿರಾಜ್ ಬಳಸಿದ್ದು ಏನು..?

ರೇಡಿಯೋ ಇಯರ್‌ವಿಗ್

ರೇಡಿಯೋ ಇಯರ್‌ವಿಗ್ ಹೇಗೆ ಕೆಲಸಮಾಡುತ್ತದೆ?

ಇದು ಟ್ರಾನ್ಸ್ಮಿಟರ್‌ನಿಂದ ಧ್ವನಿ ತರಂಗಗಳನ್ನು ಸ್ವೀಕರಿಸಿ ಕಿವಿಗೆ ನೇರವಾಗಿ ಪ್ರಸಾರ ಮಾಡುತ್ತದೆ.

-Nishanth Kogre

ಹೆಚ್ಚಿನ ಮಾಹಿತಿಗಾಗಿ ನಮ್ಮ ಗ್ರೂಪ್ ಜಾಯಿನ್ ಆಗಿ

ಇನ್ನು ಹೆಚ್ಚಿನ ಮಾಹಿತಿ ಓದಿ

Leave a Comment